ಪ್ಯಾನ್ ಕಾರ್ಡ್ ಹೊಸ ನಿಯಮಗಳು ನಿಮಗೆ ಗೊತ್ತೆ? ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ (PAN) ಎಂಬುದು 10 ಅಂಕಿಗಳ ವಿಶಿಷ್ಟ ಅಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ತೆರಿಗೆ ತುಂಬುವ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಆದಾಯ ತೆರಿಗೆ ಇಲಾಖೆಯು ಈ ವಿಶಿಷ್ಟ ಪ್ಯಾನ್ ಸಂಖ್ಯೆ (ಕಾರ್ಡ್) ಯನ್ನು ನೀಡುತ್ತದೆ. ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ, ಮೂಲದಲ್ಲಿ ತೆರಿಗೆ ಕಡಿತ (TDS) ಮಾಡಲು, ಇನ್ನಿತರ ತೆರಿಗೆ ವಿಷಯಗಳನ್ನು ಸೂಕ್ತವಾಗಿ ನಿರ್ವಹಿಸಲು ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದೆ. ಬೈಕ್‌ಗಳನ್ನು ಹೊರತು ಪಡಿಸಿ ಇನ್ನಾವುದೇ ರೀತಿಯ ವಾಹನ ಕೊಳ್ಳಲು ಅಥವಾ ಮಾರಲು, 10 ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತದ ಸ್ಥಿರಾಸ್ತಿ ಮಾರಲು ಅಥವಾ ಕೊಳ್ಳಲು ಹಾಗೂ 2 ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತದ ಸರಕು ಖರೀದಿಗೆ ಅಥವಾ ಸೇವೆ ಪಡೆದುಕೊಳ್ಳಲು ಪ್ಯಾನ್ ನಂಬರ್ ಬೇಕೇ ಬೇಕು. ಪ್ಯಾನ್ ಇಲ್ಲದಿದ್ದರೆ ಇಂಥ ವ್ಯವಹಾರಗಳನ್ನು ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ಖಾತೆ ತೆರೆಯಲು (ಉಳಿತಾಯ ಖಾತೆ ಹೊರತುಪಡಿಸಿ), ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪಡೆಯಲು, ಡಿಮ್ಯಾಟ್ ಖಾತೆ ತೆರೆಯಲು, ಒಂದು ಬಾರಿಗೆ 50 ಸಾವಿರ ರೂಪಾಯಿಗಳಿಗೂ ಹೆಚ್ಚಿನ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಅಥವಾ ಡಿಡಿ ಪಡೆಯಲು, ಒಂದು ಆರ್ಥಿಕ ವರ್ಷದಲ್ಲಿ 50 ಸಾವಿರ ರೂಪಾಯಿ ಮೀರಿದ ವಿಮಾ ಪ್ರೀಮಿಯಂ ಪಾವತಿಸಲು ಸಹ ಪ್ಯಾನ್ ಸಂಖ್ಯೆ ಅತಿ ಅಗತ್ಯವಾ...
Comments
Post a Comment