Skip to main content

Do you know the new rules about PANCard?




ಪ್ಯಾನ್ ಕಾರ್ಡ್ ಹೊಸ ನಿಯಮಗಳು ನಿಮಗೆ ಗೊತ್ತೆ?


ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ (PAN) ಎಂಬುದು 10 ಅಂಕಿಗಳ ವಿಶಿಷ್ಟ ಅಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ತೆರಿಗೆ ತುಂಬುವ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಆದಾಯ ತೆರಿಗೆ ಇಲಾಖೆಯು ಈ ವಿಶಿಷ್ಟ ಪ್ಯಾನ್ ಸಂಖ್ಯೆ (ಕಾರ್ಡ್) ಯನ್ನು ನೀಡುತ್ತದೆ.
ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ, ಮೂಲದಲ್ಲಿ ತೆರಿಗೆ ಕಡಿತ (TDS) ಮಾಡಲು, ಇನ್ನಿತರ ತೆರಿಗೆ ವಿಷಯಗಳನ್ನು ಸೂಕ್ತವಾಗಿ ನಿರ್ವಹಿಸಲು ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದೆ. ಬೈಕ್‌ಗಳನ್ನು ಹೊರತು ಪಡಿಸಿ ಇನ್ನಾವುದೇ ರೀತಿಯ ವಾಹನ ಕೊಳ್ಳಲು ಅಥವಾ ಮಾರಲು, 10 ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತದ ಸ್ಥಿರಾಸ್ತಿ ಮಾರಲು ಅಥವಾ ಕೊಳ್ಳಲು ಹಾಗೂ 2 ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತದ ಸರಕು ಖರೀದಿಗೆ ಅಥವಾ ಸೇವೆ ಪಡೆದುಕೊಳ್ಳಲು ಪ್ಯಾನ್ ನಂಬರ್ ಬೇಕೇ ಬೇಕು. ಪ್ಯಾನ್ ಇಲ್ಲದಿದ್ದರೆ ಇಂಥ ವ್ಯವಹಾರಗಳನ್ನು ಮಾಡಲು ಸಾಧ್ಯವಿಲ್ಲ.
ಬ್ಯಾಂಕ್ ಖಾತೆ ತೆರೆಯಲು (ಉಳಿತಾಯ ಖಾತೆ ಹೊರತುಪಡಿಸಿ), ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪಡೆಯಲು, ಡಿಮ್ಯಾಟ್ ಖಾತೆ ತೆರೆಯಲು, ಒಂದು ಬಾರಿಗೆ 50 ಸಾವಿರ ರೂಪಾಯಿಗಳಿಗೂ ಹೆಚ್ಚಿನ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಅಥವಾ ಡಿಡಿ ಪಡೆಯಲು, ಒಂದು ಆರ್ಥಿಕ ವರ್ಷದಲ್ಲಿ 50 ಸಾವಿರ ರೂಪಾಯಿ ಮೀರಿದ ವಿಮಾ ಪ್ರೀಮಿಯಂ ಪಾವತಿಸಲು ಸಹ ಪ್ಯಾನ್ ಸಂಖ್ಯೆ ಅತಿ ಅಗತ್ಯವಾಗಿದೆ. ನಿಶ್ಚಿತ ಅವಧಿಯ ಠೇವಣಿ ಇಡಲು ಸಹ ಪ್ಯಾನ್ ಸಂಖ್ಯೆ ನಮೂದಿಸಬೇಕಾಗುತ್ತದೆ. ಅಲ್ಲದೆ 50 ಸಾವಿರ ರೂಪಾಯಿಗೂ ಹೆಚ್ಚಿನ ಹೋಟೆಲ್ ಅಥವಾ ರೆಸ್ಟಾರೆಂಟ್ ಬಿಲ್ ಪಾವತಿಸಬೇಕಾದರೂ ಪ್ಯಾನ್ ನಂಬರ್ ಬೇಕಾಗುತ್ತದೆ. ವಿದೇಶಿ ಕರೆನ್ಸಿ ಖರೀದಿಸಲು, ಮ್ಯೂಚುವಲ್ ಫಂಡ್, ಬಾಂಡಗಳು, ಡಿಬೆಂಚರ್‌ಗಳು, ಆರ್‌ಬಿಐ ಬಾಂಡ್‌ಗಳು, 1 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಲಿಸ್ಟ್ ಆಗದ ಶೇರುಗಳ ಖರೀದಿ ಅಥವಾ ಮಾರಾಟ ಮಾಡಲು ಪ್ಯಾನ್ ಕಾರ್ಡ್ ಬೇಕೇ ಬೇಕು.
ಎಲ್ಲರೂ ಪ್ಯಾನ್ ಸಂಖ್ಯೆ ಪಡೆಯವುದು ಕಡ್ಡಾಯವೆ?
ಪ್ಯಾನ್ ಕಾರ್ಡ್ ಪಡೆಯುವುದು ಅಥವಾ ಬಿಡುವುದು ಆಯಾ ವ್ಯಕ್ತಿಯ ಸ್ವಂತ ನಿರ್ಧಾರಕ್ಕೆ ಬಿಟ್ಟ ವಿಷಯ. ಆದಾಗ್ಯೂ ವ್ಯಕ್ತಿಯೊಬ್ಬನ ಆರ್ಥಿಕ ವರ್ಷದ ಆದಾಯ ತೆರಿಗೆ ವಿನಾಯಿತಿ ಮಿತಿ (60 ವರ್ಷಕ್ಕೂ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ 2.5 ಲಕ್ಷ ರೂ.) ಯನ್ನು ಮೀರುತ್ತಿದ್ದರೆ ಅಥವಾ ವ್ಯಾಪಾರ, ವ್ಯವಹಾರ ನಡೆಸುವ ಸಂಸ್ಥೆಯೊಂದರ ವಹಿವಾಟು ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ 5 ಲಕ್ಷ ರೂಪಾಯಿಗೂ ಅಧಿಕವಾಗಿದ್ದಲ್ಲಿ ಅಂಥವರು ಪ್ಯಾನ್ ಸಂಖ್ಯೆ ಪಡೆಯುವುದು ಕಡ್ಡಾಯವಾಗಿದೆ. ಇನ್ನು ಮೂಲ ಆದಾಯದಲ್ಲಿ ತೆರಿಗೆ ಕಡಿತ (ಟಿಡಿಎಸ್) ಮಾಡಿಸುವ ವ್ಯಕ್ತಿಗಳು ಸಹ ಪ್ಯಾನ್ ಸಂಖ್ಯೆ ಪಡೆಯಬೇಕಾಗುತ್ತದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎ, 1961 ಗೆ ಹಣಕಾಸು ಕಾಯ್ದೆ 2018 ರಂತೆ ಮಾಡಿರುವ ತಿದ್ದುಪಡಿಯ ಪ್ರಕಾರ - ಭಾರತೀಯ ನಾಗರಿಕರಾಗಿ ವ್ಯಕ್ತಿಗತವಲ್ಲದ 2.5 ಲಕ್ಷ ರೂ. ಹಣಕಾಸು ವ್ಯವಹಾರದಲ್ಲಿ ಪಾಲ್ಗೊಳ್ಳುವ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್, ಡೈರೆಕ್ಟರ್, ಪಾಲುದಾರ, ಟ್ರಸ್ಟಿ, ನಿರ್ವಾಹಕ, ಸಂಸ್ಥಾಪಕ, ಕರ್ತಾ, ಚೀಫ್ ಎಕ್ಸೆಕ್ಯುಟಿವ್ ಆಫೀಸರ್, ಪ್ರಿನ್ಸಿಪಾಲ್ ಆಫೀಸರ್ ಅಥವಾ ಆಫೀಸ್ ಬೇರರ್ ಅಥವಾ ಇವರ ಪರವಾಗಿ ಕಾರ್ಯ ನಿರ್ವಹಿಸುವ ಇನ್ನಾವುದೇ ವ್ಯಕ್ತಿಗಳು ಪ್ಯಾನ್ ಕಾರ್ಡ್ ಪಡೆಯುವುದು ಕಡ್ಡಾಯವಾಗಿದೆ. ಅಂದರೆ ಒಂದು ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ವ್ಯವಹಾರ ಸಂಸ್ಥೆಯ ಒಟ್ಟು ಮಾರಾಟ/ ವ್ಯವಹಾರ/ ಒಟ್ಟು ಒಳ ಪಾವತಿ ಮೊತ್ತಗಳು 5 ಲಕ್ಷ ರೂ. ಆಗಿಲ್ಲದಿರುವಾಗ ಅಥವಾ ಆ ಮಿತಿಯನ್ನು ದಾಟುವ ಸಾಧ್ಯತೆಗಳಿಲ್ಲದಿದ್ದರೂ ಸಹ ಅವರು ಪ್ಯಾನ್ ಸಂಖ್ಯೆ ಪಡೆಯುವುದು ಕಡ್ಡಾಯ. ಜೊತೆಗೆ ಇಂಥ ಕಂಪನಿಗಳಿಗೆ ಕೆಲಸ ಮಾಡುವ ಪ್ರಿನ್ಸಿಪಲ್ ಆಫೀಸರ್‌ಗಳು ಸಹ ಪ್ಯಾನ್ ಪಡೆಯಲೇಬೇಕು. ಆದಷ್ಟೂ ಹೆಚ್ಚು ಜನರನ್ನು ತೆರಿಗೆ ವ್ಯಾಪ್ತಿಗೆ ತರಲು, ತೆರಿಗೆ ಸಂಗ್ರಹಣೆ ಸುಧಾರಿಸಲು ಮತ್ತು ಕಂಪನಿಗಳು ಹಾಗೂ ಅವನ್ನು ನಡೆಸುತ್ತಿರುವವರ ಹಣಕಾಸು ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳಲು ಸರಕಾರ ಈ ಕ್ರಮಗಳನ್ನು ಕೈಗೊಂಡಿದೆ.
ಪ್ಯಾನ್ ಪಡೆಯುವ ಅವಧಿ
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139ಎ ಪ್ರಕಾರ ಯಾವುದೇ ವ್ಯಕ್ತಿಯು ಇಂತಿಷ್ಟೇ ಅವಧಿಯಲ್ಲಿ ಪ್ಯಾನ್ ಸಂಖ್ಯೆ ಪಡೆಯಬೇಕೆಂಬುದು ಕಡ್ಡಾಯವಲ್ಲ. ಆದರೆ ಕೇಂದ್ರದ ನೇರ ತೆರಿಗೆಗಳ ಪ್ರಾಧಿಕಾರ (ಸಿಬಿಡಿಟಿ) ಇತ್ತೀಚೆಗೆ ಪ್ಯಾನ್ ಅರ್ಜಿ ಫಾರ್ಮ 49/49ಎ ಗಳಿಗೆ ಕೆಲ ಬದಲಾವಣೆಗಳನ್ನು ಮಾಡಿದೆ. ಈ ಹೊಸ ಬದಲಾವಣೆಗಳು ಇದೇ 2018ರ ಡಿಸೆಂಬರ್ 5 ರಿಂದ ಜಾರಿಗೆ ಬರಲಿವೆ. ಇದರ ಪ್ರಕಾರ ಯಾವುದೇ ವ್ಯಕ್ತಿಯ ಆದಾಯ ಲೆಕ್ಕಾಚಾರ ಹಾಕಬೇಕಾದರೆ ಅದು ಅನ್ವಯವಾಗುವ ವರ್ಷದ ಮೇ 31 ರಂದು ಅಥವಾ ಅದಕ್ಕೂ ಮುಂಚೆ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸಿರಬೇಕಾಗಿದ್ದು ಕಡ್ಡಾಯವಾಗಿದೆ.
ಹೊಸ ಬದಲಾವಣೆಗಳನ್ವಯ ಪ್ಯಾನ್ ಕಾರ್ಡ್ ಅರ್ಜಿಯಲ್ಲಿ ಇನ್ನು ಮುಂದೆ ಅರ್ಜಿದಾರ ತನ್ನ ತಂದೆಯ ಹೆಸರನ್ನು ನಮೂದಿಸುವುದು ಕಡ್ಡಾಯವಲ್ಲ. ತಾಯಿಯಿಂದಲೇ ಜೋಪಾನ ಮಾಡಲ್ಪಟ್ಟವರು ಇನ್ನು ಕೇವಲ ತಾಯಿಯ ಹೆಸರನ್ನು ಮಾತ್ರ ನಮೂದಿಸಿದರೆ ಸಾಕು. ಅರ್ಜಿಯಲ್ಲಿ ತಾಯಿ ಅಥವಾ ತಂದೆ ಇಬ್ಬರಲ್ಲಿ ಒಬ್ಬರ ಹೆಸರನ್ನು ನಮೂದಿಸಬಹುದಾಗಿದ್ದು, ಇದೇ ಮಾಹಿತಿ ಪ್ಯಾನ್ ಕಾರ್ಡ್ ಮೇಲೆ ಪ್ರಿಂಟ್ ಆಗಿರುತ್ತದೆ. ತೀರಿಹೋದ ಅಥವಾ ದೂರವಾಗಿರುವ ತಂದೆಯ ಹೆಸರನ್ನು ತಮ್ಮ ಪ್ಯಾನ್ ಕಾರ್ಡ್‌ನಲ್ಲಿ ಬಳಸಲು ಇಚ್ಛಿಸದಿರುವ ತೆರಿಗೆದಾತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ವದ ಬದಲಾವಣೆ ಮಾಡಲಾಗಿದೆ.
ಎಲೆಕ್ಟ್ರಾನಿಕ್ ರೂಪದಲ್ಲಿಯೂ ಪ್ಯಾನ್ ಬಳಕೆ
ಈ ಮುನ್ನ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಲ್ಯಾಮಿನೇಟೆಡ್ ಪ್ಯಾನ್ ಕಾರ್ಡ್ ನೀಡಲಾಗುತ್ತಿತ್ತು. 2018ರ ಹಣಕಾಸು ಕಾಯ್ದೆಯ ಪ್ರಕಾರ ಇನ್ನು ಪ್ಯಾನ್ ಎಂಬುದು ಕೇವಲ 10 ಅಂಕಿಗಳ ನಂಬರ್ ಮಾತ್ರವಾಗಿರಲಿದ್ದು, ಲ್ಯಾಮಿನೇಟೆಡ್ ಕಾರ್ಡ್ ಇಟ್ಟುಕೊಳ್ಳಲೇಬೇಕೆಂಬುದು ಕಡ್ಡಾಯವಲ್ಲ. ಅಂದರೆ ಎಲ್ಲ ಅವಶ್ಯಕ ಸಂದರ್ಭಗಳಲ್ಲಿ ಪ್ಯಾನ್ ಸಂಖ್ಯೆಯನ್ನು ಮಾತ್ರ ನಮೂದಿಸಿದರೆ ಸಾಕು.

source:dailyhunt.in
https://assccl.com
#KnowAboutYourPAN
#ZeroBalanceAccount

Comments

Popular posts from this blog

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು : Ayshwarya Syndicate

॥ ವರಮಹಾಲಕ್ಷ್ಮಿ ಹಬ್ಬಕ್ಕೆ ಒಂದು ಸಣ್ಣ ಕಥೆ ॥ ಓರ್ವ ಸಿರಿವಂತ ಅವನಿಗೆ ನಾಲ್ಕು ಜನ ಮಕ್ಕಳು. ನಾಲ್ಕು ಜನ ಸೊಸೆಯಂದಿರು ಸಿರಿ - ಸಂಪದ ಯಾವುದಕ್ಕೂ ಕೊರತೆ ಇರಲಿಲ್ಲ . ಒಂದು ದಿನ ರಾತ್ರಿ ಸಿರಿವಂತನು ಮಲಗಿರುವಾಗ ವಿಚಿತ್ರ ಕನಸು ಕಂಡ ಮನೆಯ ಭಾಗ್ಯಲಕ್ಷ್ಮಿ ಹೊರಗೆ ಹೋಗುತ್ತಿದ್ದಳು ಅವರೀರ್ವರ ಮಧ್ಯದಲ್ಲಿ ಸಂಭಾಷಣೆ ನಡೆಯಿತು . ಲಕ್ಷ್ಮಿ - ಸಿರಿವಂತನೆ ನಾನು ಈಗ ಹೊರಗೆ ಹೋಗುತ್ತಿದ್ದೇನೆ ನಿನಗೆ ಏನು ವರ ಬೇಕು ಬೇಡು ಕೊಡುತ್ತೇನೆ ಸಿರಿವಂತ - ಈಗ ಈ ಮನೆಯ ಹೊಣೆಯನ್ನು ನನ್ನ ಮಕ್ಕಳು ಮತ್ತು ಸೊಸೆಯಂದಿರು ವಹಿಸಿಕೊಂಡಿದ್ದಾರೆ ಅವರಿಗೆ ಕೇಳಿ ಹೇಳುತ್ತೇನೆ . ಲಕ್ಷ್ಮಿ - ಆಗಲಿ ಅವರಿಗೆ ಕೇಳಿ ನನಗೆ ತಿಳಿಸು . ಮರುದಿನ ಮುಂಜಾನೆ ಸಿರಿವಂತನು ತನ್ನ ಮಕ್ಕಳಿಗೆ ಕರೆದು ನಡೆದ ಸಂಗತಿಯನ್ನು ಹೇಳಿದ ಅದನ್ನು ಕೇಳಿ ಹಿರಿಯ ಮಗ ಹೇಳಿದ - ನೂರು ಜನ್ಮ ಕುಳಿತು ಉಂಡರು ಸವೆಯಲಾಗದಷ್ಟು ಸಿರಿ ಸಂಪತ್ತು ಕೇಳು . ಎರಡನೆಯ ಮಗ ಹೇಳಿದ - ಸಂಪತ್ತು ಸ್ಥಿರವಲ್ಲ ಯಾರಾದರೂ ಕಳವು ಮಾಡಬಹುದು ಅಲ್ಲವೇ ಕಸಿದುಕೊಳ್ಳಬಹುದು ಭೂಮಿಯನ್ನು ಮಾತ್ರ ಯಾರೂ ಕಳವು ಮಾಡಲಾರರು ಕಸಿದುಕೊಳ್ಳಲಾರರು ಸಾವಿರಾರು ಎಕರೆ ಭೂಮಿಯನ್ನೇ ಕೇಳಿ ಬಿಡಿ ಮೂರನೇ ಮಗ ಹೇಳಿದ - ಈ ಸಿರಿ ಸಂಪದ ಭೂಮಿ ಸೀಮೆ ಏನು ಮಾಡುವುದು ನಮ್ಮ ಕೈಯಲ್ಲಿ ಅಧಿಕಾರ ಇಲ್ಲದಿದ್ದರೆ ಸಿರಿ ಸಂಪದ ಭೂಮಿ ಸೀಮೆ ಯಾವುದೂ ಸ್ಥಿರವಲ್ಲ ಆದುದರಿಂದ ಎಂದೆಂದಿಗೂ ನಮ್ಮ ಕೈ ಬಿಡಲಾರದಂಥ ಅಧಿಕಾರವನ್ನೇ

All About ASSCCL Saving Accounts

Saving Account  Opening a  # Savings_Account  (SB) at Ayshwarya Syndicate Credit Co-Operative Limited comes with many added privileges compared to other co-operative societies and banks. ASSCCL provides a No Frills Account to members, i.e. the members can operate the account at zero balance too. Additionally, you also get annual 8%* of savings account interest rate. ASSCCL Savings Account Features & Benefits Minimum Balance Required – NIL  Interest Rate – 8%* per annum  Unlimited Transactions without any charges Nomination Facility SMS Facility Mobile Application Facility Fund Transfer Facility through  NEFT/ RTGS Incoming NEFT Facility  Statement Facility without any charge HIGH-INTEREST SAVINGS ACCOUNT Being one of the most recognizable  credit co-operative societies in India,  Ayshwarya Syndicate Credit Co-Operative Limited  provides the best financial products to their members. Right from basic products to exclusive products, we at  Ay

ASSCCL Savings Account

Savings Account Opening a  Savings Account  (SA) at  Ayshwary Syndicate Souharda Credit Co-Operative Society comes with many added privileges compared to other co-operative societies and banks. Ayshwarya provides a No Frills Account to members, i.e. the members can operate the account at zero balance too. Additionally, you also get annual 8%* of  savings account interest rate. ASSCCL  Savings Account Features & Benefits Minimum Balance Required – 25,000 to Avail This Interest rates  Interest Rate – 8%* per annum Automatic Open Facility with (For New Members) Unlimited Transactions without any charges Nomination Facility SMS Facility Mobile Application Facility Fund Transfer Facility through MMA or NEFT/ RTGS Incoming NEFT Facility  Statement Facility without any charge HIGH-INTEREST SAVINGS ACCOUNT Being one of the most recognizable  credit co-operative societies in India,   Ayshwary Syndicate Souharda Credit Co-Operative Society