Skip to main content

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು : Ayshwarya Syndicate

॥ ವರಮಹಾಲಕ್ಷ್ಮಿ ಹಬ್ಬಕ್ಕೆ ಒಂದು ಸಣ್ಣ ಕಥೆ ॥


ಓರ್ವ ಸಿರಿವಂತ ಅವನಿಗೆ ನಾಲ್ಕು ಜನ ಮಕ್ಕಳು. ನಾಲ್ಕು ಜನ ಸೊಸೆಯಂದಿರು ಸಿರಿ - ಸಂಪದ ಯಾವುದಕ್ಕೂ ಕೊರತೆ ಇರಲಿಲ್ಲ .
ಒಂದು ದಿನ ರಾತ್ರಿ ಸಿರಿವಂತನು ಮಲಗಿರುವಾಗ ವಿಚಿತ್ರ ಕನಸು ಕಂಡ
ಮನೆಯ ಭಾಗ್ಯಲಕ್ಷ್ಮಿ ಹೊರಗೆ ಹೋಗುತ್ತಿದ್ದಳು ಅವರೀರ್ವರ ಮಧ್ಯದಲ್ಲಿ ಸಂಭಾಷಣೆ ನಡೆಯಿತು .
ಲಕ್ಷ್ಮಿ - ಸಿರಿವಂತನೆ ನಾನು ಈಗ ಹೊರಗೆ ಹೋಗುತ್ತಿದ್ದೇನೆ ನಿನಗೆ ಏನು ವರ ಬೇಕು ಬೇಡು ಕೊಡುತ್ತೇನೆ
ಸಿರಿವಂತ - ಈಗ ಈ ಮನೆಯ ಹೊಣೆಯನ್ನು ನನ್ನ ಮಕ್ಕಳು ಮತ್ತು ಸೊಸೆಯಂದಿರು ವಹಿಸಿಕೊಂಡಿದ್ದಾರೆ ಅವರಿಗೆ ಕೇಳಿ ಹೇಳುತ್ತೇನೆ .
ಲಕ್ಷ್ಮಿ - ಆಗಲಿ ಅವರಿಗೆ ಕೇಳಿ ನನಗೆ ತಿಳಿಸು .
ಮರುದಿನ ಮುಂಜಾನೆ ಸಿರಿವಂತನು ತನ್ನ ಮಕ್ಕಳಿಗೆ ಕರೆದು ನಡೆದ ಸಂಗತಿಯನ್ನು ಹೇಳಿದ ಅದನ್ನು ಕೇಳಿ
ಹಿರಿಯ ಮಗ ಹೇಳಿದ - ನೂರು ಜನ್ಮ ಕುಳಿತು ಉಂಡರು ಸವೆಯಲಾಗದಷ್ಟು ಸಿರಿ ಸಂಪತ್ತು ಕೇಳು .
ಎರಡನೆಯ ಮಗ ಹೇಳಿದ - ಸಂಪತ್ತು ಸ್ಥಿರವಲ್ಲ ಯಾರಾದರೂ ಕಳವು ಮಾಡಬಹುದು ಅಲ್ಲವೇ ಕಸಿದುಕೊಳ್ಳಬಹುದು ಭೂಮಿಯನ್ನು ಮಾತ್ರ ಯಾರೂ ಕಳವು ಮಾಡಲಾರರು ಕಸಿದುಕೊಳ್ಳಲಾರರು ಸಾವಿರಾರು ಎಕರೆ ಭೂಮಿಯನ್ನೇ ಕೇಳಿ ಬಿಡಿ
ಮೂರನೇ ಮಗ ಹೇಳಿದ - ಈ ಸಿರಿ ಸಂಪದ ಭೂಮಿ ಸೀಮೆ ಏನು ಮಾಡುವುದು ನಮ್ಮ ಕೈಯಲ್ಲಿ ಅಧಿಕಾರ ಇಲ್ಲದಿದ್ದರೆ
ಸಿರಿ ಸಂಪದ ಭೂಮಿ ಸೀಮೆ ಯಾವುದೂ ಸ್ಥಿರವಲ್ಲ ಆದುದರಿಂದ ಎಂದೆಂದಿಗೂ ನಮ್ಮ ಕೈ ಬಿಡಲಾರದಂಥ ಅಧಿಕಾರವನ್ನೇ ಕೇಳಿ ಬಿಡಿ
ಈಗ ನಾಲ್ಕನೆಯವನ ಸರದಿ ಅವನು ಹೇಳಿದ - ನನಗಿಂತಲೂ ನನ್ನ ಹೆಂಡತಿ ತುಂಬಾ ಜಾಣೆ ಅವಳು ತುಂಬಾ ದೈವಭಕ್ತಳು ಇಂಥ ವಿಚಾರದಲ್ಲಿ ಅವಳನ್ನು ಕರೆದು ಕೇಳುತ್ತೇನೆ
ಚಿಕ್ಕ ಮಗನ ಹೆಂಡತಿ ಬಂದು ಹೇಳಿದಳು
ನಾನು ಕಿರಿಯಳು ನಾನೇನು ಬಲ್ಲೆ ? ಆದರೂ ತಾವು ನನ್ನನ್ನು ಕರೆದು ಕೇಳಿರುವಿರೆಂದು ಹೇಳುತ್ತೇನೆ ಕೇಳಿ .
ನಮಗೀಗ ಈ ಮನೆಯಲ್ಲಿ ಸಿರಿ ಸಂಪದ ಯಾವುದಕ್ಕೂ ಕೊರತೆಯಿಲ್ಲ ಲಕ್ಷ್ಮಿಯೂ ಹೋದ ಮೇಲೆ ಅವಳು ಕೊಡುವ ಸಿರಿ ಸಂಪದವಾದರೂ ನಮ್ಮಲ್ಲಿ ಇರಲು ಹೇಗೆ ಸಾಧ್ಯ ?
ನಾವೆಲ್ಲರೂ ಈ ಮನೆಯಲ್ಲಿ ಪ್ರೀತಿಯಿಂದ
ಬಾಳಿ ಬದುಕುತ್ತಿದ್ದೇವೆ ಮುಂದಾದರೂ ಈ ಪ್ರೀತಿ ಹೀಗೆ ವರ್ತಿಸುತ್ತೀರಲಿ
ಎಂದು ಲಕ್ಷ್ಮಿಗೆ ಕೇಳಿರಿ ಕಿರಿಯ ಸೊಸೆ ಮಾತು ಎಲ್ಲರಿಗೂ ಹಿಡಿಸಿತ್ತು
ಅದೇ ರೀತಿ ಆ ಮನೆಯ ಯಜಮಾನ
ಲಕ್ಷ್ಮಿಗೆ ಕೇಳಿದ - ತಾಯಿ ನಮಗೆ ಯಾವ
ಸಿರಿ ಸಂಪದವು ಬೇಡ ನಾವೆಲ್ಲರೂ ಹಿಂದಿನಂತೆ ಮುಂದೆಯೂ ಪ್ರೀತಿಯಿಂದಿರುವಂತೆ ಕರುಣಿಸು
ಈ ಮಾತನ್ನು ಕೇಳುತ್ತಲೇ ಹೊರಗೆ ಹೋಗುತ್ತಿದ್ದ ಲಕ್ಷ್ಮೀಯು ಮತ್ತೆ ಮನೆಯ ಒಳಗೆ ಬಂದು ಕುಳಿತಳು .
ಸಿರಿವಂತ - ಮನೆಯಿಂದ ಹೋಗಲಣಿಯಾದವಳು ಮತ್ತೆ ಒಳಗೆ ಬಂದಿದ್ದನ್ನು ಕಂಡು ನನಗೆ ಸಂತೋಷವಾಗಿದೆ ತಾಯಿ ನಿನಗೆ ಅನಂತ ಧನ್ಯವಾದಗಳು
ಲಕ್ಷ್ಮಿ - ನಾನು ಒಳಗೆ ಬಂದಿರುವುದೇಕೆ ತಿಳಿಯಿತೇ ?
ಸಿರಿವಂತ - ಇಲ್ಲಾ ತಾಯಿ ನನಗೇನೂ ತಿಳಿಯಲಿಲ್ಲ
ಲಕ್ಷ್ಮೀ- ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲೇ ನಾನಿರುವುದು ಆದುದರಿಂದ ನಾನು ತಿರುಗಿ ಬಂದೆ.
ಈ ಮಾತನ್ನು ಕೇಳಿದ ಕೂಡಲೇ ಪ್ರೀತಿಯೇ ನಿಜವಾದ ಸಿರಿ ಸಂಪದವೆಂದು ಸಿರಿವಂತನ ಕುಟುಂಬದವರಿಗೆಲ್ಲ ಮನದಟ್ಟಾಗಿತ್ತು .
ಎದೆಯಲ್ಲಿ ಪ್ರೀತಿ ಮುಖದಲ್ಲಿ ನಗೆ ಇಲ್ಲದಿದ್ದರೆ ಮನೆಯಲ್ಲಿ ಎಷ್ಟು ಸಿರಿ ಸಂಪದ ವಿದ್ದರೆ
ಅದಕ್ಕೇನು ಬೆಲೆ !
ಎಲ್ಲರೂ ತಮ್ಮ ಕುಟುಂಬದವರೊಂದಿಗೆ ಪ್ರೀತಿಯಿಂದ ನಗುನಗುತ್ತಾ ವರಮಹಾಲಕ್ಷ್ಮಿಯ ಹಬ್ಬವನ್ನು ಆಚರಿಸಿರಿ 🙏🙏🙏
May This Varmahalakshmi Goddess Lakshmi Bless You With a Good Health & Prosperity
#BestCreditCooperativeSociety
#BestInterestonInvestments

Comments

Popular posts from this blog

Consumer Accounts

Ayshwarya Syndicate provides its members a high return Consumer Savings Account for savings through a seamless digital experience on its Spark IN app. Up to 8% p.a. returns, among the highest interest rates for Savings No minimum balance or maintenance charges Daily interest credit in Savings Load money through various payment methods like debit and credit cards, net banking, and wallets Quickly and securely transfer money between co-operative members and to other banks without any charges High return Deposits with no minimum commitment Option to avail monthly credit of interest from Deposits which is immediately usable after credit Currently working towards setting up Flexible Deposits and Recurring Deposits at attractive rates

Do you know the new rules about PANCard?

ಪ್ಯಾನ್ ಕಾರ್ಡ್ ಹೊಸ ನಿಯಮಗಳು ನಿಮಗೆ ಗೊತ್ತೆ? ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ (PAN) ಎಂಬುದು 10 ಅಂಕಿಗಳ ವಿಶಿಷ್ಟ ಅಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ತೆರಿಗೆ ತುಂಬುವ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಆದಾಯ ತೆರಿಗೆ ಇಲಾಖೆಯು ಈ ವಿಶಿಷ್ಟ ಪ್ಯಾನ್ ಸಂಖ್ಯೆ (ಕಾರ್ಡ್) ಯನ್ನು ನೀಡುತ್ತದೆ. ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ, ಮೂಲದಲ್ಲಿ ತೆರಿಗೆ ಕಡಿತ (TDS) ಮಾಡಲು, ಇನ್ನಿತರ ತೆರಿಗೆ ವಿಷಯಗಳನ್ನು ಸೂಕ್ತವಾಗಿ ನಿರ್ವಹಿಸಲು ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದೆ. ಬೈಕ್‌ಗಳನ್ನು ಹೊರತು ಪಡಿಸಿ ಇನ್ನಾವುದೇ ರೀತಿಯ ವಾಹನ ಕೊಳ್ಳಲು ಅಥವಾ ಮಾರಲು, 10 ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತದ ಸ್ಥಿರಾಸ್ತಿ ಮಾರಲು ಅಥವಾ ಕೊಳ್ಳಲು ಹಾಗೂ 2 ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತದ ಸರಕು ಖರೀದಿಗೆ ಅಥವಾ ಸೇವೆ ಪಡೆದುಕೊಳ್ಳಲು ಪ್ಯಾನ್ ನಂಬರ್ ಬೇಕೇ ಬೇಕು. ಪ್ಯಾನ್ ಇಲ್ಲದಿದ್ದರೆ ಇಂಥ ವ್ಯವಹಾರಗಳನ್ನು ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ಖಾತೆ ತೆರೆಯಲು (ಉಳಿತಾಯ ಖಾತೆ ಹೊರತುಪಡಿಸಿ), ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪಡೆಯಲು, ಡಿಮ್ಯಾಟ್ ಖಾತೆ ತೆರೆಯಲು, ಒಂದು ಬಾರಿಗೆ 50 ಸಾವಿರ ರೂಪಾಯಿಗಳಿಗೂ ಹೆಚ್ಚಿನ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಅಥವಾ ಡಿಡಿ ಪಡೆಯಲು, ಒಂದು ಆರ್ಥಿಕ ವರ್ಷದಲ್ಲಿ 50 ಸಾವಿರ ರೂಪಾಯಿ ಮೀರಿದ ವಿಮಾ ಪ್ರೀಮಿಯಂ ಪಾವತಿಸಲು ಸಹ ಪ್ಯಾನ್ ಸಂಖ್ಯೆ ಅತಿ ಅಗತ್ಯವಾ...