ಪ್ಯಾನ್ ಕಾರ್ಡ್ ಹೊಸ ನಿಯಮಗಳು ನಿಮಗೆ ಗೊತ್ತೆ? ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ (PAN) ಎಂಬುದು 10 ಅಂಕಿಗಳ ವಿಶಿಷ್ಟ ಅಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ತೆರಿಗೆ ತುಂಬುವ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಆದಾಯ ತೆರಿಗೆ ಇಲಾಖೆಯು ಈ ವಿಶಿಷ್ಟ ಪ್ಯಾನ್ ಸಂಖ್ಯೆ (ಕಾರ್ಡ್) ಯನ್ನು ನೀಡುತ್ತದೆ. ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ, ಮೂಲದಲ್ಲಿ ತೆರಿಗೆ ಕಡಿತ (TDS) ಮಾಡಲು, ಇನ್ನಿತರ ತೆರಿಗೆ ವಿಷಯಗಳನ್ನು ಸೂಕ್ತವಾಗಿ ನಿರ್ವಹಿಸಲು ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದೆ. ಬೈಕ್‌ಗಳನ್ನು ಹೊರತು ಪಡಿಸಿ ಇನ್ನಾವುದೇ ರೀತಿಯ ವಾಹನ ಕೊಳ್ಳಲು ಅಥವಾ ಮಾರಲು, 10 ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತದ ಸ್ಥಿರಾಸ್ತಿ ಮಾರಲು ಅಥವಾ ಕೊಳ್ಳಲು ಹಾಗೂ 2 ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತದ ಸರಕು ಖರೀದಿಗೆ ಅಥವಾ ಸೇವೆ ಪಡೆದುಕೊಳ್ಳಲು ಪ್ಯಾನ್ ನಂಬರ್ ಬೇಕೇ ಬೇಕು. ಪ್ಯಾನ್ ಇಲ್ಲದಿದ್ದರೆ ಇಂಥ ವ್ಯವಹಾರಗಳನ್ನು ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ಖಾತೆ ತೆರೆಯಲು (ಉಳಿತಾಯ ಖಾತೆ ಹೊರತುಪಡಿಸಿ), ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪಡೆಯಲು, ಡಿಮ್ಯಾಟ್ ಖಾತೆ ತೆರೆಯಲು, ಒಂದು ಬಾರಿಗೆ 50 ಸಾವಿರ ರೂಪಾಯಿಗಳಿಗೂ ಹೆಚ್ಚಿನ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಅಥವಾ ಡಿಡಿ ಪಡೆಯಲು, ಒಂದು ಆರ್ಥಿಕ ವರ್ಷದಲ್ಲಿ 50 ಸಾವಿರ ರೂಪಾಯಿ ಮೀರಿದ ವಿಮಾ ಪ್ರೀಮಿಯಂ ಪಾವತಿಸಲು ಸಹ ಪ್ಯಾನ್ ಸಂಖ್ಯೆ ಅತಿ ಅಗತ್ಯವಾ
॥ ವರಮಹಾಲಕ್ಷ್ಮಿ ಹಬ್ಬಕ್ಕೆ ಒಂದು ಸಣ್ಣ ಕಥೆ ॥ ಓರ್ವ ಸಿರಿವಂತ ಅವನಿಗೆ ನಾಲ್ಕು ಜನ ಮಕ್ಕಳು. ನಾಲ್ಕು ಜನ ಸೊಸೆಯಂದಿರು ಸಿರಿ - ಸಂಪದ ಯಾವುದಕ್ಕೂ ಕೊರತೆ ಇರಲಿಲ್ಲ . ಒಂದು ದಿನ ರಾತ್ರಿ ಸಿರಿವಂತನು ಮಲಗಿರುವಾಗ ವಿಚಿತ್ರ ಕನಸು ಕಂಡ ಮನೆಯ ಭಾಗ್ಯಲಕ್ಷ್ಮಿ ಹೊರಗೆ ಹೋಗುತ್ತಿದ್ದಳು ಅವರೀರ್ವರ ಮಧ್ಯದಲ್ಲಿ ಸಂಭಾಷಣೆ ನಡೆಯಿತು . ಲಕ್ಷ್ಮಿ - ಸಿರಿವಂತನೆ ನಾನು ಈಗ ಹೊರಗೆ ಹೋಗುತ್ತಿದ್ದೇನೆ ನಿನಗೆ ಏನು ವರ ಬೇಕು ಬೇಡು ಕೊಡುತ್ತೇನೆ ಸಿರಿವಂತ - ಈಗ ಈ ಮನೆಯ ಹೊಣೆಯನ್ನು ನನ್ನ ಮಕ್ಕಳು ಮತ್ತು ಸೊಸೆಯಂದಿರು ವಹಿಸಿಕೊಂಡಿದ್ದಾರೆ ಅವರಿಗೆ ಕೇಳಿ ಹೇಳುತ್ತೇನೆ . ಲಕ್ಷ್ಮಿ - ಆಗಲಿ ಅವರಿಗೆ ಕೇಳಿ ನನಗೆ ತಿಳಿಸು . ಮರುದಿನ ಮುಂಜಾನೆ ಸಿರಿವಂತನು ತನ್ನ ಮಕ್ಕಳಿಗೆ ಕರೆದು ನಡೆದ ಸಂಗತಿಯನ್ನು ಹೇಳಿದ ಅದನ್ನು ಕೇಳಿ ಹಿರಿಯ ಮಗ ಹೇಳಿದ - ನೂರು ಜನ್ಮ ಕುಳಿತು ಉಂಡರು ಸವೆಯಲಾಗದಷ್ಟು ಸಿರಿ ಸಂಪತ್ತು ಕೇಳು . ಎರಡನೆಯ ಮಗ ಹೇಳಿದ - ಸಂಪತ್ತು ಸ್ಥಿರವಲ್ಲ ಯಾರಾದರೂ ಕಳವು ಮಾಡಬಹುದು ಅಲ್ಲವೇ ಕಸಿದುಕೊಳ್ಳಬಹುದು ಭೂಮಿಯನ್ನು ಮಾತ್ರ ಯಾರೂ ಕಳವು ಮಾಡಲಾರರು ಕಸಿದುಕೊಳ್ಳಲಾರರು ಸಾವಿರಾರು ಎಕರೆ ಭೂಮಿಯನ್ನೇ ಕೇಳಿ ಬಿಡಿ ಮೂರನೇ ಮಗ ಹೇಳಿದ - ಈ ಸಿರಿ ಸಂಪದ ಭೂಮಿ ಸೀಮೆ ಏನು ಮಾಡುವುದು ನಮ್ಮ ಕೈಯಲ್ಲಿ ಅಧಿಕಾರ ಇಲ್ಲದಿದ್ದರೆ ಸಿರಿ ಸಂಪದ ಭೂಮಿ ಸೀಮೆ ಯಾವುದೂ ಸ್ಥಿರವಲ್ಲ ಆದುದರಿಂದ ಎಂದೆಂದಿಗೂ ನಮ್ಮ ಕೈ ಬಿಡಲಾರದಂಥ ಅಧಿಕಾರವನ್ನೇ